top of page
Search
Writer's pictureSantosh Karki

ಶೃದ್ಧೆಯಿಂದ ಆ ತಾಯಿಯಲ್ಲಿ ಸಂಕಲ್ಪಿಸಿದರೆ ಸಕಲವೂ ಸಾಧ್ಯ - ಶೀಲಾ ಕುಲ್ಕರ್ಣಿ ಅವರ ಅನುಭವ

ಓಂ ಶ್ರೀ ದಿಗಂಬರೊ  ಪದ್ಮ ಮಾತೃಭ್ಯೋನಮಃ 

ಓಂ ಶ್ರೀ ದಿಗಂಬರ ನಮಸ್ತೇತೋ  ಚಿಂತಿತಾರ್ಥ ಪ್ರದಾಯಿನಿ. 🏻.

    ಈ ವರ್ಷ್  ತಾಯಿಯ ಜಯಂತಿಯ ನಿಮಿತ್ತ ಸಪ್ತಾಹವು  ಪ್ರಾರಂಭವಾಗಿದೆ.   ಕೊರೋನ ರೋಗದ ನಿಮಿತ್ತವಾಗಿ ಈ ಸಾರಿ ನಾನು ಮನೆಯಲ್ಲಿಯೇ ಸಪ್ತಾಹ ಮಾಡುತ್ತಿರುವೆನು.  ಶ್ರೀ ದತ್ತಸ್ವರೂಪಿ ಪದ್ಮಾತಾಯಿ ಗುರುಚರಿತ್ರೆಯ ಪಠಣ ಸಮಯದಲ್ಲಿ ಎಣ್ಣೆ ದೀಪವನ್ನು ಇಡಬೇಕು  ಮತ್ತು ಗ್ರಂಥಕ್ಕೆ ಬಿಳಿಯ ಹೂವನ್ನು ಏರಿಸಿದರೆ ಒಳಿತು ಎಂದು  ಗ್ರಂಥದಲ್ಲಿ ಕೊಡಲಾಗಿದೆ ಆದುದರಿಂದ ನಾನು ಗ್ರಂಥಕ್ಕೆ ಬಿಳಿಯ ಹೂವನ್ನು  ಏರಿಸುತ್ತಲೇ ಬಂದಿರುವೆನು.  


   ಎರಡನೇ  ದಿನದಂದು ಗ್ರಂಥಕ್ಕೆ ಏರಿಸಲು  ನಮ್ಮ ಮನೆಯಲ್ಲಿ ಮಲ್ಲಿಗೆಯ ಗಿಡದಲ್ಲಿ  ಒಂದು ಮೊಗ್ಗು  ಸಹ ಇರಲಿಲ್ಲ,  ಕೊರೊನ  ಸಂಬಂಧ ಪೇಟೆಯಲ್ಲಿ ಹೂಗಳನ್ನು  ತರುವದಿಲ್ಲ. ನಮ್ಮ  ಸಂಬಂಧಿಕರು ವಿಜಯಾ  ಕಟ್ಟಿಮಠವರ ಮನೆ ಇದೆ   ಬಿಳಿಯ ಹೂವಿದ್ದರೆ ಕಳಿಸು ಎಂದು ಹೇಳಿದೆ.   ಅವರು ನಮ್ಮಲ್ಲಿಯೂ ಇಲ್ಲ ಎಂದು ಹೇಳಿದರು.  ಎರಡನೆಯ ಸಪ್ತಾಹದ ದಿನ  ಬಿಳಿಯ ಹೂವು ಗ್ರಂಥಕ್ಕೆ  ಎರಿಸಲು  ಇಲ್ಲವಲ್ಲ   ಎಂದು ಮನಸ್ಸಿಗೆ ಬೇಜಾರಾಯಿತು. 

   ಮರುದಿನ ಮುಂಜಾನೆ  ತುಳಸಿಎನ್ನಾದರೂ  ಏರಿಸೋಣ ಎಂದು  ತರಲು ಹೋದೆನು.   ಆಗ ಅಲ್ಲಿಯೇ  ಪಕ್ಕದಲ್ಲಿದ್ದ ಮಲ್ಲಿಗೆ ಗಿಡದಲ್ಲಿ ಎರಡು ಸುಂದರವಾದ ಮಲ್ಲಿಗೆ ಹೂಗಳು ಅರಳಿದ್ದವು. ಹಿಂದಿನ ದಿನ ಎಷ್ಟು ಹುಡುಕಿದರೂ ಒಂದೂ  ಮೊಗ್ಗು   ಆ ಗಿಡದಲ್ಲಿ ಇರಲಿಲ್ಲ,  ಮುಂಜಾನೆ ಎರಡು  ಮಲ್ಲಿಗೆ ಹೂಗಳು ಅರಳಿದ್ದವು.  ನನಗೆ ತುಂಬಾ ಆಶ್ಚರ್ಯವೂ ಮತ್ತು ಸಂತೋಷವೂ ಆಯಿತು.  ಇದು ತಾಯಿಯ ಪವಾಡವಲ್ಲದೆ ಮತ್ತೇನು ?  ಹೀಗೆ ತಾಯಿಯು ನಮ್ಮ ಮನದಾಳನ್ನು ಅರಿತು  ನಮ್ಮ ಆಸೆಗಳನ್ನು ಪೂರೈಸುತ್ತಿದ್ದಾರೆ. ಇಂತಹ  ಎಷ್ಟೋ ತಾಯಿಯ   ಲೀಲೆಗಳನ್ನು ಅನುಭವಿಸಿರುವೇ. ಇದು  ಇತ್ತೀಚಿನ ಹೊಸ ಅನುಭವ

- ಶೀಲಾ ಕುಲ್ಕರ್ಣಿ ಅವರ ಅನುಭವ


0 views0 comments
bottom of page